ಯೂಂಗ್, ಕಾರ್ಲ್ ಗುಸ್ಟೇವ್
	 1875-1961. ಸ್ವಿಸ್ ಮನೋವಿe್ಞÁನಿ ಹಾಗೂ ಚಿಕಿತ್ಸಕ ಮನಶ್ಶಾಸ್ತ್ರಜ್ಞ. ವಿಶ್ಲೇಷಣಾತ್ಮಕ ಮನೋವಿe್ಞÁನದ ಪ್ರರ್ವತಕ. ಹುಟ್ಟಿದ್ದು ಸ್ವಿಟ್‍ಜರ್‍ಲೆಂಡಿನ ಬಾಸೆಲ್‍ನಲ್ಲಿ. ತಂದೆ ಪಾದ್ರಿ, ಯೂಂಗ್‍ನ ಆರಂಭದ ವಿದ್ಯಾಭ್ಯಾಸ ಬಾಸೆಲ್ ಶಾಲೆಯಲ್ಲಿ ಆಯಿತು. ಅನಂತರ ಬಾಸೆಲ್ ವಿಶ್ವವಿದ್ಯಾಲಯದಿಂದ ಎಂ.ಡಿ. ಪದವಿಯನ್ನು ಗಳಿಸಿದ (1902). ಫ್ರಾಯ್ಡ್‍ನ ಬರವಣಿಗೆಗಳಿಗೆ ಆಕರ್ಷಿತನಾಗಿ ಮನೋವಿe್ಞÁನ, ಚಿಕಿತ್ಸಕ ಮನೋವಿe್ಞÁನಿಗಳಲ್ಲಿ ಆಸಕ್ತಿ ವಹಿಸಿ ಅದರಲ್ಲಿ ಸಂಶೋಧನೆಗೆ ತೊಡಗಿದ. 1900-1907ರವರೆಗೆ ಯೂಜಿನ್ ಬ್ಲಾಯ್ಲರ್ ಎಂಬ ವಿದ್ವಾಂಸನೊಡನೆ ಕೆಲಸಮಾಡಿದ. ಈ ಅವಧಿಯಲ್ಲಿ ಈತ ಅನೇಕ ಲೇಖನಗಳನ್ನು ಪ್ರಕಟಿಸಿ ಪ್ರಸಿದ್ಧನಾದ. 1907ರ ಸುಮಾರಿಗೆ ಸಿಗ್ಮಂಡ್ ಫ್ರಾಯ್ಡ್‍ನ ಪರಿಚಯವಾಯಿತು. ಈ ಪರಿಚಯ ಗಾಢ ಸ್ನೇಹವಾಗಿ ಪರಿಣಮಿಸಿತು. ಹಲವಾರು ವರ್ಷಗಳು ಇಬ್ಬರೂ ಒಟ್ಟಿಗೆ ಸಂಶೋಧನೆಗಳನ್ನು ನಡೆಸಿದರು. ಯೂಂಗ್ 1912ರಲ್ಲಿ ದಿ ಸೈಕಾಲಜಿ ಆಫ್ ದಿ ಅನ್‍ಕಾನಷಿಯಸ್ (ಅನಂತರ ಇದು ಸಿಂಬಲ್ಸ್ ಆಫ್ ಟ್ರಾನ್ಸ್‍ಫಾರ್ಮೇಷನ್ ಎಂಬ ಹೆಸರಿನಿಂದ ಪ್ರಕಟವಾಯಿತು). ಎಂಬ ಗ್ರಂಥವನ್ನು ಪ್ರಕಟಿಸಿದ. ಈ ಕೃತಿ ಫ್ರಾಯ್ಡ್ ಸಿದ್ಧಾಂತಕ್ಕಿಂತ ಭಿನ್ನವಾದ ಹೊಸ ತತ್ತ್ವವೊಂದನ್ನು ಪ್ರಕಟಿಸಿತು. ಅನೇಕ ವಿಷಯಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಹೊಂದಿದ ಫ್ರಾಯ್ಡ್ ಯೂಂಗ್ ಸ್ನೇಹ ಈ ಗ್ರಂಥ ಪ್ರಕಟಣೆಯೊಂದಿಗೆ ಬೇರ್ಪಟ್ಟಿತು. 1913ರ ವೇಳೆಗೆ ಇಬ್ಬರೂ ದೂರವಾದರು. ಮುಂದೆ ಯೂಂಗ್ 1913-17ರವರಗೆ ಆಳವಾದ ಅಧ್ಯಯನದಲ್ಲಿ ತೊಡಗಿ ತನ್ನದೇ ಆದ ವಿಶ್ಲೇಷಣಾತ್ಮಕ ಮನಶ್ಶಾಸ್ತ್ರವನ್ನು ಪ್ರಚುರಪಡಿಸಿದ. ಆನ್ ದಿ ಇಂಪಾರ್ಟೆನ್ಸ್ ಆಫ್ ದಿ ಅನ್‍ಕಾನ್‍ಷಿಯಸ್ ಇನ್ ಸೈಕೊ ಪೆಥಾಲಜಿ ಮತ್ತು ದಿ ಟ್ರಾನ್ಸ್‍ಂಡೆಂಟ್ ಫಂಕ್ಷನ್_ ಎಂಬ ಎರಡು ಲೇಖನಗಳು ಈ ಅವಧಿಯಲ್ಲಿ ಈ ಅವಧಿಯ ಈತನ ಮಹತ್ತ್ವದ ಬರವಣಿಗೆಗಳು.
ಯೂಂಗ್‍ನ ಮನೋವಿe್ಞÁನವಲ್ಲದೆ ಧರ್ಮ, ಪುರಾಣ ಸಾಮಾಜಿಕ ಸಮಸ್ಯೆಗಳು ಕಲೆ, ಸಾಹಿತ್ಯ, ಅತೀಂದ್ರೀಯ ವಿದ್ಯೆಗಳಾದ ರಸವಿದ್ಯೆ, ಟೆಲಿಪತಿ, ಯೋಗ ಮೊದಲಾದ ವಿಷಯಗಳನ್ನು ಕುರಿತು ಅಧ್ಯಯನ ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದಾನೆ. 1921ರಲ್ಲಿ ಉತ್ತರ ಆಫ್ರಿಕ ಪ್ರದೇಶದಲ್ಲಿಯೂ ಆರಿಸೋನ ಮತ್ತು ನ್ಯೂ ಮೆಕ್ಸಿಕೋಗಳ ಕಡೆ ಇರುತ್ತಿದ್ದ ಪ್ಯೂಬ್ಲೊ ಇಂಡಿಯನ್ ಜನರ ನಡುವೆಯೂ 1926ರಲ್ಲಿ ಮತ್ತೆ ಆಫ್ರಿಕ ದೇಶದಲ್ಲಿ ಕೆನ್ಯದ ಎಲ್ಗನ್ ಪರ್ವತದ ತಪ್ಪಲಲ್ಲಿ ಇದ್ದ ಆದಿವಾಸಿ ಜನರೊಂದಿಗೂ ವಾಸಮಾಡಿ ಪ್ರಾಚೀನ ಜನರ ಸಾಂಕೇತಿಕ ವ್ಯವಹಾರವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ. ಮುಂದೆ ಭಾರತ, ಇಂಗ್ಲೆಂಡ್, ಅಮೆರಿಕ ಮುಂತಾದ ದೇಶಗಳಲ್ಲಿ ಸಂಚಾರ ಮಾಡಿದ. ಪ್ರಾಚ್ಯ ದೇಶಗಳಿಂದ ಈತನಿಗೆ ಹೆಚ್ಚಿನ ನೆರವು ದೊರೆಯಿತು. ಫ್ರಾಂಕ್‍ಫರ್ಟ್‍ನಲ್ಲಿ ಚೀನ ಸಂಶೋಧನ ಮಂದಿರದ ಅಧ್ಯಕ್ಷನಾಗಿ ರಿಚರ್ಡ್ ವಿಲ್ಹೆಲ್ಮ್ ಎಂಬ ವಿದ್ವಾಂಸನೊಂದಿಗೆ ಕೆಲಸಮಾಡಿ, 1930ರಲ್ಲಿ ದಿ ಸೀಕ್ರೆಟ್ ಆಫ್ ದಿ ಗೋಲ್ಡನ್ ಫ್ಲವರ್ (ಸ್ವರ್ಣ ಪುಷ್ಪದ ರಹಸ್ಯ) ಎಂಬ ಸಾಂಕೇತಿಕ ವಿವರಣಾತ್ಮಕ ಗ್ರಂಥ ಸಂಪಾದಿಸಿದ. ಹಾಗೆಯೇ ಭಾರತೀಯ ಸಂಸ್ಕøತಿ ಮತ್ತು ದರ್ಶನಗಳಲ್ಲಿ ವಿಶೇಷ ವಿದ್ವತ್ತನ್ನು ಪಡೆದಿದ್ದ ಸಿಮ್ಮರ್‍ನೊಂದಿಗೂ ಕಲೆತು ಭಾರತೀಯ ಸಂಕೇತಗಳನ್ನು ಅಧ್ಯಯನ ಮಾಡಿದ. ಹಂಗರಿ ದೇಶದ ಪ್ರಾಚೀನ ಪುರಾಣಗಳ ಪಂಡಿತನಾಗಿದ್ದ ಕಾಲ್ ಕೆಲೇನ್ಯಿ ಎಂಬವನೊಂದಿಗೆ ಕೆಲಸ ಮಾಡಿ ಪುರಾಣಶಾಸ್ತ್ರದ ಮೇಲೆ ಪ್ರಬಂಧಗಳು ಎಂಬ ಗ್ರಂಥ ಸಿದ್ಧಪಡಿಸಿದ. 1943ರಲ್ಲಿ ಬಾಸೆಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ. ಈತನನ್ನು 1936ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯ, 1938ರಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ, 1945ರಲ್ಲಿ ಜಿನೀವ ವಿಶ್ವವಿದ್ಯಾಲಯ-ಇವು ಗೌರವ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸಿದವು. 1930ರಲ್ಲಿ ಜರ್ಮನಿಯಲ್ಲಿ ನಡೆದ ಮಾನಸಿಕ ಚಿಕಿತ್ಸಾ ಸಮ್ಮೇಳನಕ್ಕೆ ಈತ ಅಧ್ಯಕ್ಷನಾಗಿದ್ದ. 1933ರಲ್ಲಿ ಅಂತಾರಾಷ್ಟ್ರೀಯ ಮಾನಸಿಕ ಚಿಕಿತ್ಸಾ ಸಂಸ್ಥೆಯ ವೈದ್ಯ ವಿಭಾಗದ ಅಧ್ಯಕ್ಷನಾಗಿದ್ದ. ಈತನ ಗೌರವಾರ್ಥವಾಗಿ ಜೂಲಿಬ್‍ನಲ್ಲಿ ಸಿ.ಜಿ. ಯೂಂಗ್ ಇನ್‍ಸ್ಟಿಟ್ಯೂಟ್ ಎಂಬ ಸಂಶೋಧನ ಸಂಸ್ಥೆಯೊಂದನ್ನು 1948ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆ ಯಾಂಗ್ ಪದ್ಧತಿಯ ವಿಶ್ಲೇಷಣಾತ್ಮಕ ಮನೋವಿe್ಞÁನದ ಅಧ್ಯಯನದ ಮೆಕ್ಕಾ ಎಂದು ಖ್ಯಾತವಾಗಿದೆ. ಇಂದು ವಿಶ್ವದಾದ್ಯಂತ ಯೂಂಗ್‍ನ ಅನುಯಾಯಿಗಳಿದ್ದಾರೆ. ಯೂಂಗ್ ತನ್ನ 86ನೆಯ ವಯಸ್ಸಿನಲ್ಲಿ, 1961ರ ಜೂನ್ ತಿಂಗಳಿನಲ್ಲಿ ನಿಧನನಾದ. 

ಮನಶ್ಶಾಸ್ತ್ರಕ್ಕೆ ಯೂಂಗ್‍ನ ಕೊಡುಗೆ : ಫ್ರಾಯ್ಡ್ ಸಿದ್ಧಾಂತದಲ್ಲಿನ ಗುಣವನ್ನು ಮೊಟ್ಟ ಮೊದಲು ಅರ್ಥಮಾಡಿಕೊಂಡವ ಯಾಂಗ್; ಆ ಸಿದ್ಧಾಂತದಲ್ಲಿದ್ದ ಲೋಪ ದೋಷಗಳನ್ನು ಎತ್ತಿ ಹೇಳಿದವರಲ್ಲಿ ಮೊದಲಿಗನೂ ಇವನೇ. ಯಾಂಗ್‍ನ ತತ್ತ್ವ ಫ್ರಾಯ್ಡ್‍ನಿಂದ ತುಂಬ ಪ್ರಭಾವಿತವಾಗಿದೆ. ಎಂಬುವುದರಲ್ಲಿ ಎರಡೂ ಮಾತಿಲ್ಲ. ಯಾಂಗ್ ಮೂಲಕಾಮನೆ (ಲಿಬಿಡೊ), ಸುಪ್ತಚೇತನ (ಅನ್‍ಕಾನ್‍ಷಿಯಸ್) ಮುಂತಾದ ಕಲ್ಪನೆಗಳನ್ನು ತನ್ನ ಸಿದ್ಧಾಂತದಲ್ಲಿಯೂ ಉಳಿಸಿದ. ಆದರೆ ಅವಕ್ಕೆ ವಿಶಾಲವಾದ ಅರ್ಥಕೊಟ್ಟು ಗ್ರಾಹ್ಯವನ್ನಾಗಿ ಮಾಡಿದ. ಫ್ರಾಯ್ಡ್ ಪ್ರಮುಖವೆಂದು ಸಾರಿದ ಲೈಂಗಿಕ ಪ್ರವೃತ್ತಿಯನ್ನು ಗೌಣವೆಂದು ಯಾಂಗ್ ನಿರ್ದೇಶಿಸಿ ವ್ಯಕ್ತಿತ್ವದಲ್ಲಿ ಸಾಮಾಜಿಕ ಪ್ರಾಚೀನ ಪ್ರತ್ಯಯಗಳು (ಆರ್ಕಿಟೈಪ್ಸ್) ಮತ್ತು ಫ್ರಾಯ್ಡ್ ಹೇಳಿದ ಇದರ (ಇಡ್) ಪ್ರವೃತ್ತಿಗಳು ಎರಡೂ ಸೇರಿ ಸುಪ್ತಚೇತನವಾಗುವುದೆಂದು ವಾದಿಸಿದ. ದಮನವು (ರಿಪ್ರೆಷನ್) ಸುಪ್ತಚೇತನದ ಕಾರಣವೆಂದು ಫ್ರಾಯ್ಡ್ ಹೇಳಿದುದನ್ನು ಯಾಂಗ್ ನಿರಾಕರಿಸಿದ. ಸುಪ್ತಚೇತನ ತಲೆ ತಲಾಂತರಗಳಲ್ಲಿ ಅನುವಂಶಿಕವಾಗಿ ಒಂದೊಂದಾಗಿ ಮನುಷ್ಯ ಕೆಲವು ಪ್ರಾಚೀನ ಪ್ರತ್ಯಯಗಳನ್ನು ಬಳಸುವಂತೆ ಅವನನ್ನು ಪ್ರಚೋದಿಸುತ್ತದೆ ಮತ್ತು ಇದಂ ಪ್ರವೃತ್ತಿಗಳಿಂದ ಪೂರ್ವನಿರ್ದಿಷ್ಟವಾದ ಲಕ್ಷ್ಯಗಳನ್ನು ಪಡೆಯಲು ಯತ್ನಿಸುವಂತೆ ಪ್ರೇರಣೆ ಮಾಡುತ್ತದೆ ಎಂದು ಯೂಂಗ್ ವಾದಿಸಿದ. ದಮನದಿಂದ ಮೈದಳೆದ ಸುಪ್ತಚೇತನವನ್ನು ಯೂಂಗ್ ವೈಯಕ್ತಿಕ ಸುಪ್ತಚೇತನ ಎಂದು ನಿರ್ದೇಶಿಸಿದ. ಇದರ ವ್ಯಾಪ್ತಿ ಸಂಕುಚಿತ. ಲಿಬಿಡೊ ಎಂಬುದು ಸಹಜಶಕ್ತಿ; ಬಾಳುವೆಯ ಪ್ರಯೋಜನಕ್ಕಾಗಿ ಇದರ ಬಳಕೆ ವ್ಯವಸ್ಥಿತವಾಗಿದೆ. ಈ ಮೂಲಕ ಮನೆಯಲ್ಲಿ ಲೈಂಗಿಕ ಪ್ರಸಕ್ತಿ ಇರದು. ಆತ್ಮನಿಯಂತ್ರಣದ ದೃಷ್ಟಿಯಿಂದ ಸದಾ ಕ್ರಿಯಾಶೀಲವಾಗಿರುವ ಚೈತನ್ಯಶಕ್ತಿ ಇದು. ಇದರಲ್ಲಿ ಮತ್ತೆ ಮತ್ತೆ ಮೈದಳೆಯುವ ವಿಶಿಷ್ಟ ಚಿತ್ರಣಗಳಿಂದ ಮೂಲ ಪ್ರವೃತ್ತಿಗಳಾದ ಪ್ರಾಚೀನ ಪ್ರತ್ಯಯಗಳನ್ನು ಅನುಮಾನಿಸಿಕೊಳ್ಳಬಹುದು. ಪ್ರಾಚೀನ ಪ್ರತ್ಯಯಗಳು ಅರಿವಿನ ಮೇರೆಗೆ ಮೀರಿದವು (ಇವನ್ನು ಮೊದಲು ಯೂಂಗ್ ಅದಿಮ ಚಿತ್ರಣಗಳು- ಪ್ರೈಮಾರ್ಡಿಯಲ್ ಮೇಜಸ್ ಎಂದು ಕರೆದಿದ್ದ.) ಈ ಪ್ರಾಚೀನ ಪ್ರತ್ಯಯಗಳಿಂದ ಅರಿವು ಪ್ರಭಾವಿತವಾಗುತ್ತವೆ. ಇವು ಎಷ್ಟು ಪ್ರಾಚೀನವೆಂದರೆ ಮನುಷ್ಯ ಭೂಮಿಯ ಮೇಲೆ ವಾಸಮಾಡಲಾರಂಭಿಸಿದ ಕಾಲದಿಂದ ಸಂಚಯನಮಾಡಿಟ್ಟಂಥವು. ಮನುಷ್ಯನಿಗೆ ಮುನ್ನ ಇದ್ದ ಪ್ರಾಣಿಗಳ ಸ್ಥಿತಿಯಲ್ಲಿಯೂ ಇವು ಇದ್ದವೆಂದು ಯೂಂಗ್ ವಾದ. ಸಾವಿರಾರು ವರ್ಷಗಳ ಅನುಭವದಿಂದ ಉದ್ಭೋತವಾದ ಈ ಪ್ರತ್ಯಯ ಜಾಲವು ಸಂಕೇತಗಳ ಸ್ವರೂಪದಲ್ಲಿ ಪ್ರತಿವ್ಯಕ್ತಿಯಲ್ಲಿಯೂ ಉಳಿಯುತ್ತದೆ. 

ಮನಶ್ಶಾಸ್ತ್ರಕ್ಕೆ ಯೂಂಗ್‍ನ ಇನ್ನೊಂದು ಕೊಡುಗೆಯೆಂದರೆ ಮಾನಸವರ್ಗಣೆ (ಸೈಕಾಲಾಜಿಕಲ್ ಟೈಪಾಲಜಿ). ತಮ್ಮ ಕಡೆಯೇ ತಮ್ಮ ಪ್ರವೃತ್ತಿಗಳೆಲ್ಲವನ್ನೂ ಹರಿಸಿಕೊಂಡವರಲ್ಲಿ ಕಾಣುವ ಅಂತರ್ಮುಖತೆ (ಇನ್‍ಟ್ರಾವರ್ಟ್), ಹೊರಗಿನ ಜಗತ್ತಿನೊಂದಿಗೆ ಕ್ರಿಯಾಶೀಲ ನೆಂಟನ್ನು ವ್ಯವಸ್ಥೆಮಾಡಿಕೊಂಡವರಲ್ಲಿ ಕಾಣುವ ಬಹಿರ್ಮುಖತೆ (ಎಕ್ಸ್‍ಟ್ರಾವಟ್). ಹೀಗೆ ವರ್ಗದ್ವೈತ್ವವನ್ನು ಈತ ಪ್ರತಿಪಾದಿಸಿದ. ಈ ಭೇದದ ಆಧಾರ ವ್ಯಕ್ತಿಗಳ ಅವಸ್ಥಾನಗಳು (ಆಟಿಟ್ಯೂಡ್ಸ್). ಈ ಎರಡು ವರ್ಗವಲ್ಲದೆ ಚಿಂತನೆ (ಥಿಂಕಿಂಗ್). ಸಂವೇದನೆ (ಸೆನ್ಸೇಷನ್). ಭಾವ(ಫೀಲಿಂಗ್) ಮತ್ತು ಅಂತರ್ದೃಷ್ಟಿ (ಇಂಟ್ಯೂಷನ್) ಇವುಗಳ ಆಧಾರದ ಮೇಲೆ ಕಾರ್ಯಕ ವರ್ಗಗಳನ್ನು (ಫಂಕ್ಷನಲ್ ಟೈಪ್) ಕೂಡ ಯೂಂಗ್ ನಿರೂಪಿಸಿದ. ಈ ವ್ಯವಸ್ಥೆಯಿಂದ ಒಟ್ಟು ಅಷ್ಟ ವ್ಯಕ್ತಿತ್ವ ವರ್ಗಗಳು ಸಾಧ್ಯವಾದವು.

ಮಾನವ ಸಂಸ್ಕøತನಾಗಬೇಕಾದರೆ ಅವನಿಗೂ ಸಮಾಜಕ್ಕೂ ಸಾಮರಸ್ಯ ಉಂಟಾಗಬೇಕು. ಮನುಷ್ಯ ಸಮಾಜಕ್ಕೆ ಸರಿಹೊಂದುವಂತೆ ಪಾತ್ರವನ್ನು ವಹಿಸಬೇಕಾಗುತ್ತದೆ. ಈ ಮುಖವಾಡ ಹಾಕಿಕೊಂಡು ಸಹಜ ಪ್ರವೃತ್ತಿಗಳನ್ನು ಮರೆಮಾಚುವ ಪ್ರವೃತ್ತಿಗೆ ಪರ್ಸೊನ ಎಂದು ಹೆಸರು. ಇದು ಸಾಮೂಹಿಕ ತತ್ತ್ವ. ಸೌಹಾರ್ದ, ಸ್ನೇಹ, ಮರ್ಯಾದೆ, ಔಚಿತ್ಯ, ಆತಿಥ್ಯ ಮುಂತಾದವೆಲ್ಲ ಇದರ ಫಲ. ಇದಿಲ್ಲದಿದ್ದರೆ ನಮಗೂ ಸಮಾಜಕ್ಕೂ ವ್ಯವಹಾರವೇ ಇರದು. ಆದರೆ ವ್ಯಕ್ತಿಯಲ್ಲಿ ವ್ಯಕ್ತಿತ್ವದ ಇನ್ನೊಂದು ಮುಖ ಇರುತ್ತದೆ; ಇದು ವ್ಯಕ್ತಿಗೆ ಮಾತ್ರ ಸೀಮಿತ; ಇದರ ಅಸ್ತಿತ್ವ ವೈಯಕ್ತಿಕ. ಇದನ್ನು ಯೂಂಗ್ ನೆರಳು(ಶೆಡ್) ಎಂದು ಕರೆದಿದ್ದಾರೆ. ಸಮಾಜ ವಿರುದ್ಧವಾದ, ನಿಷಿದ್ಧವಾದ ಪ್ರವೃತ್ತಿಗಳೆಲ್ಲ ಇಲ್ಲಿ ಅಡಗಿರುತ್ತವೆ. ಇದು ವೈಯಕ್ತಿಕ ಸುಪ್ತಚೇತನ. ಇದು ನೈತಿಕವಾಗಿ ನಮ್ಮ ಜಾಗೃತ ವ್ಯಕ್ತಿತ್ವಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈಯಕ್ತಿಕ ಸುಪ್ತಚೇತನದ ತರ್ಕವನ್ನೇ ಹಿಡಿದು ಯೂಂಗ್ ಪ್ರತಿ ಮನುಷ್ಯನೂ ಅರ್ಧನಾರೀಶ್ವರ ಪ್ರವೃತ್ತಿಯುಳ್ಳವನೆಂದು ನಿರ್ದೇಶಿಸಿದ. ಪ್ರತಿ ಪುರುಷನಲ್ಲಿ ಸ್ತ್ರೀ ಅಂಶ ಸುಪ್ತವಾಗಿಯೂ ಪ್ರತಿ ಸ್ತ್ರೀಯಲ್ಲಿ ಪುರುಷಾಂಶವು ಸುಪ್ತವಾಗಿಯೂ ಇರುವುದೆಂದು ವಾದಿಸಿದ. ಮೊದಲನೆಯದನ್ನು ಅನಿಮ ಎಂದೂ ಎರಡನೆಯದನ್ನೂ ಅನಿಮಸ್ ಎಂದೂ ಈತ ಕರೆದ. ಇದೇ ದೃಷ್ಟಿಯಿಂದ ಯೂಂಗ್ ಧರ್ಮವನ್ನೂ ಸ್ವಪ್ನವನ್ನೂ ವಿಶ್ಲೇಷಣೆ ಮಾಡಿದ. ಶಿಕ್ಷಣ ಸಂವಿಧಾನಗಳ ಮೇಲೂ ಯೂಂಗ್‍ನ ಪ್ರಭಾವ ಬಿದ್ದಿದೆ. ತನ್ನ ಪದಸಂಯೋಜನಾ ಪರೀಕ್ಷೆಯನ್ನು ಬಳಸಿ ಮಕ್ಕಳ ಮಾನಸಿಕ ಜೀವನ ಅವರ ತಾಯಿತಂದೆಯರ ಮಾನಸಿಕ ಜೀವನಕ್ಕೆ ಸಮನಾಗಿರುವುದೆಂದು ತೋರಿಸಿದ. ಯೂಂಗ್‍ನ ವಿಶ್ಲೇಷಣ ಪದ್ಧತಿ ಶಿಕ್ಷಣ ಕ್ರಮಗಳಲ್ಲಿ ಸೇರಿ ಬಂದರೆ ಮಕ್ಕಳ ಕ್ರಮಗಳಲ್ಲಿ ಸೇರಿಬಂದರೆ ಮಕ್ಕಳ ಭಾವೀ ಜೀವನ ನಿರೋಗವಾಗಿಯೂ ವಿಕಾಸಪರವಾಗಿಯೂ ಆಗುವುದೆಂದು ನಿರೀಕ್ಷೆ ಇದೆ. 

ಯೂಂಗ್ ಬರೆದ ಗ್ರಂಥಗಳಲ್ಲಿ ದಿಸೈಕಾಲಜಿ ಆಫ್ ದಿ ಅನ್‍ಕಾನ್‍ಷಿಯಸ್ (1910), ಸ್ಟಡೀಸ್ ಇನ್ ವರ್ಡ್ ಅಸೋಸಿಯೇಷನ್ (1918), ಸೈಕಾಲಜಿಕಲ್ ಟೈಪ್ಸ್ (1923), ಕಾಂಟ್ರಿಬ್ಯೂಷನ್ಸ್ ಟು ಅನಲಿಟಿಕಲ್ ಸೈಕಾಲಜಿ (1928), ಮಾಡರ್ನ್ ಮ್ಯಾನ್ ಇನ್ ಸರ್ಚ್ ಆಫ್ ಎ ಸೋಲ್ (1933), ಸೈಕಾಲಜಿ ಅಂಡ್ ರಿಲಿಜನ್ (1938), ಇಂಟಿಗ್ರೇಷನ್ ಆಫ್ ಪರ್ಸನಾಲಿಟಿ (1940), ಎಸ್ಸೇಸ್ ಆನ್ ಕಾಂಟೆಂಪೊರರಿ ಈವೆಂಟ್ಸ್ (1947), ಇಂಟ್ರೊಡಕ್ಷನ್ ಟು ಎ ಸೈನ್ ಆಫ್ ಮೈಥಾಲಜಿ (1949), ಸೈಕಾಲಜಿ ಅಂಡ್ ಆಲ್ಕೆಮಿ ಇವು ಮುಖ್ಯವಾದವು. ಮೆಮೊರೀಸ್, ಡ್ರೀಮ್ಸ್, ರಿಫ್ಲೆಕ್ಷನ್ಸ್ (1961) ಎಂಬುದು ಇವನ ಆತ್ಮಕಥೆ. ಈ ಗ್ರಂಥ ಯೂಂಗ್‍ನ ಮನೋ ವೈe್ಞÁನಿಕ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ತುಂಬ ನೆರವು ನೀಡುತ್ತದೆ. ಇವನ ಸಮಗ್ರ ಬರೆಹಗಳು ಸುಮಾರು 17 ಸಂಪುಟಗಳಲ್ಲಿ ಪ್ರಕಟವಾಗಿವೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ